Telegram Join My Telegram WhatsApp Join My WhatsApp

ಅಗ್ನಿವೀರ್ ನೇಮಕಾತಿ 2026: 25,000+ ಹುದ್ದೆಗಳು | 8ನೇ, 10ನೇ, PUC ಪಾಸ್‌ಗೆ ಅವಕಾಶ | ₹30,000 ಸಂಬಳ ಆರಂಭ!

ಯುವಕರ ಕನಸಿಗೆ ದೊಡ್ಡ ಅವಕಾಶ

ಭಾರತೀಯ ಸೇನೆ ಸೇರೋದು ಅನೇಕರ ಕನಸು. “ನಾನೂ ದೇಶ ಸೇವೆ ಮಾಡ್ಬೇಕು” ಅನ್ನೋ ಹಂಬಲ ಸಾವಿರಾರು ಯುವಕರ ಹೃದಯದಲ್ಲಿ ಇದೆ. ಅಂತಹ ಯುವಕರಿಗೆ ಈಗ ಸಿಕ್ಕಿರುವ ದೊಡ್ಡ ಅವಕಾಶವೇ ಅಗ್ನಿವೀರ್ ನೇಮಕಾತಿ 2026.

ಭಾರತೀಯ ಸೇನೆ, ಅಗ್ನಿಪಥ ಯೋಜನೆಯಡಿ 25,000ಕ್ಕೂ ಹೆಚ್ಚು ಹುದ್ದೆಗಳ ಭರ್ಜರಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. 8ನೇ, 10ನೇ ಅಥವಾ 12ನೇ ತರಗತಿ ಪಾಸ್ ಮಾಡಿದವರು ಈ ಅವಕಾಶವನ್ನು ಬಳಸಿಕೊಳ್ಳಬಹುದು.

₹30,000 ರಿಂದ ಆರಂಭವಾಗುವ ವೇತನ, 4 ವರ್ಷಗಳ ಸೇವೆಯ ನಂತರ ₹11.71 ಲಕ್ಷ ಸೇವಾ ನಿಧಿ ಪ್ಯಾಕೇಜ್, ಶಿಸ್ತು, ಗೌರವ, ದೇಶಸೇವೆ – ಈ ಎಲ್ಲವೂ ಒಂದೇ ಅವಕಾಶದಲ್ಲಿ!

ಈ ಲೇಖನದಲ್ಲಿ ನೀವು ತಿಳಿದುಕೊಳ್ಳುವದು:

  • ಅರ್ಹತೆ ಏನು?
  • ವಯಸ್ಸಿನ ಮಿತಿ ಎಷ್ಟು?
  • ವೇತನ ಎಷ್ಟು ಸಿಗುತ್ತದೆ?
  • ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
  • ಪರೀಕ್ಷೆ ಸಿಲಬಸ್ ಏನು?
  • ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ.

📌 ನೇಮಕಾತಿ ಸಂಕ್ಷಿಪ್ತ ಮಾಹಿತಿ

ಸಂಸ್ಥೆ: Indian Army (ಭಾರತೀಯ ಸೇನೆ)
ಹುದ್ದೆ ಹೆಸರು: ಅಗ್ನಿವೀರ್ (GD, Technical, Clerk, Tradesman)
• ಒಟ್ಟು ಹುದ್ದೆಗಳು: ಸುಮಾರು 25,000+ (ಅಂದಾಜು)
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ
ಆರಂಭಿಕ ವೇತನ: ₹30,000 ಪ್ರತಿ ತಿಂಗಳು
ವಯೋಮಿತಿ: 17½ ವರ್ಷದಿಂದ 21 ವರ್ಷದೊಳಗಿನವರು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01 ಏಪ್ರಿಲ್ 2026
ಅಧಿಕೃತ ವೆಬ್‌ಸೈಟ್: joinindianarmy.nic.in

📂 ಹುದ್ದೆಗಳ ವಿವರ

1️⃣ ಅಗ್ನಿವೀರ್ ಜನರಲ್ ಡ್ಯೂಟಿ (GD)

10ನೇ ಪಾಸ್ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ. ಫಿಸಿಕಲ್ ಫಿಟ್ನೆಸ್ ಮುಖ್ಯ.

2️⃣ ಅಗ್ನಿವೀರ್ ಟೆಕ್ನಿಕಲ್

ವಿಜ್ಞಾನ ವಿಭಾಗದಲ್ಲಿ 12ನೇ ಪಾಸ್ ಮಾಡಿದವರಿಗೆ ಸೂಕ್ತ.

3️⃣ ಅಗ್ನಿವೀರ್ ಕ್ಲರ್ಕ್ / ಸ್ಟೋರ್ ಕೀಪರ್

ವಾಣಿಜ್ಯ ಅಥವಾ ವಿಜ್ಞಾನ ವಿಭಾಗ ವಿದ್ಯಾರ್ಥಿಗಳಿಗೆ.

4️⃣ ಅಗ್ನಿವೀರ್ ಟ್ರೇಡ್ಸ್‌ಮ್ಯಾನ್

8ನೇ ಅಥವಾ 10ನೇ ಪಾಸ್ ಅಭ್ಯರ್ಥಿಗಳಿಗೆ.

🎓 ಶೈಕ್ಷಣಿಕ ಅರ್ಹತೆ

GD / Tradesman:

  • 8ನೇ ಅಥವಾ 10ನೇ ತರಗತಿ
  • ಕನಿಷ್ಠ 45% ಅಂಕಗಳು

Clerk / Technical:

  • 12ನೇ ತರಗತಿ ಪಾಸ್
  • ವಿಜ್ಞಾನ / ವಾಣಿಜ್ಯ / ಕಲೆ ವಿಭಾಗ

🎂 ವಯಸ್ಸಿನ ಮಿತಿ

  • ಕನಿಷ್ಠ: 17½ ವರ್ಷ
  • ಗರಿಷ್ಠ: 21 ವರ್ಷ
  • ಜನ್ಮ ದಿನಾಂಕ: 01 ಜುಲೈ 2005 ರಿಂದ 01 ಜುಲೈ 2009ರ ನಡುವೆ

📏 ದೈಹಿಕ ಮಾನದಂಡಗಳು

  • ಕನಿಷ್ಠ ಎತ್ತರ: 162 ಸೆಂ.ಮೀ
  • ಎದೆ ವಿಸ್ತರಣೆ: 5 ಸೆಂ.ಮೀ
  • ತೂಕ: ವಯಸ್ಸು ಹಾಗೂ ಎತ್ತರಕ್ಕೆ ಅನುಗುಣವಾಗಿ

💰 ವೇತನ ವಿವರ

  • 1ನೇ ವರ್ಷ :  ₹30,000
  • 2ನೇ ವರ್ಷ.: ₹33,000
  • 3ನೇ ವರ್ಷ  : ₹36,500
  • 4ನೇ ವರ್ಷ  : ₹40,000
💼 ಸೇವಾ ನಿಧಿ ಪ್ಯಾಕೇಜ್

4 ವರ್ಷಗಳ ಸೇವೆಯ ನಂತರ ಸರ್ಕಾರದಿಂದ ₹11.71 ಲಕ್ಷ ಮೊತ್ತ ನೀಡಲಾಗುತ್ತದೆ. ಇದನ್ನು “Seva Nidhi Package” ಎಂದು ಕರೆಯುತ್ತಾರೆ.

🎁 ಇತರೆ ಸೌಲಭ್ಯಗಳು
  • DA, TA, HRA
  • ವೈದ್ಯಕೀಯ ಸೌಲಭ್ಯ
  • ವಿಮಾ ರಕ್ಷಣೆ
  • ದೇಶಸೇವೆಯ ಗೌರವ
  • ಭವಿಷ್ಯದಲ್ಲಿ ಶಾಶ್ವತ ಸೇನೆಗೆ 25% ಅಭ್ಯರ್ಥಿಗಳಿಗೆ ಅವಕಾಶ

💳 ಅರ್ಜಿ ಶುಲ್ಕ

₹250 (ಎಲ್ಲಾ ಅಭ್ಯರ್ಥಿಗಳಿಗೆ ಸಮಾನ)

ಪಾವತಿ ವಿಧಾನ:

  • ಡೆಬಿಟ್ ಕಾರ್ಡ್
  • ಕ್ರೆಡಿಟ್ ಕಾರ್ಡ್
  • UPI
  • ನೆಟ್ ಬ್ಯಾಂಕಿಂಗ್

📝 ಆಯ್ಕೆ ಪ್ರಕ್ರಿಯೆ

ಹಂತ 1: ಆನ್‌ಲೈನ್ ಪರೀಕ್ಷೆ (CEE)

  • 50 ಪ್ರಶ್ನೆಗಳು
  • 60 ನಿಮಿಷ
  • ವಿಷಯಗಳು: GK, ಗಣಿತ, ವಿಜ್ಞಾನ, ಲಾಜಿಕಲ್ ರೀಸನಿಂಗ್

ಹಂತ 2: ದೈಹಿಕ ಪರೀಕ್ಷೆ (PFT)

  • 1.6 ಕಿಮೀ ಓಟ
  • ಪುಲ್-ಅಪ್ಸ್
  • ಲಾಂಗ್ ಜಂಪ್
  • ಜಿಗ್-ಜಾಗ್ ಬ್ಯಾಲನ್ಸ್

ಹಂತ 3: ವೈದ್ಯಕೀಯ ಪರೀಕ್ಷೆ

ಅಂತಿಮ ಆಯ್ಕೆ:

  • ಮೆರಿಟ್ ಆಧಾರಿತ

📅 ಪ್ರಮುಖ ದಿನಾಂಕಗಳು

  • ಅರ್ಜಿ ಆರಂಭ  :  13 ಫೆಬ್ರವರಿ 2026
  • ಕೊನೆಯ ದಿನ   :  01 ಏಪ್ರಿಲ್ 2026
  • CEE ಪರೀಕ್ಷೆ     :   01 – 15 ಜೂನ್ 2026

🖥️ ಅರ್ಜಿ ಸಲ್ಲಿಸುವ ವಿಧಾನ (Step-by-step)

ಅನೇಕರಿಗೆ ದೊಡ್ಡ ಪ್ರಶ್ನೆ ಏನು ಗೊತ್ತಾ?

“ಅರ್ಜಿ ಹೇಗೆ ಹಾಕಬೇಕು?”

“ಯಾವ website?”

“ಮೊದಲಿಗೆ ಏನು ಮಾಡಬೇಕು?”

ಇಗಾ ನೀವು ಗಾಬರಿಯಾಗಬೇಕಾಗಿಲ್ಲ. ಇಲ್ಲಿ ಹಂತ ಹಂತವಾಗಿ ಸುಲಭವಾಗಿ ವಿವರಿಸಿದ್ದೇನೆ 👇

ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

ಮೊದಲು ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು:

👉 joinindianarmy.nic.in

⚠️ ಗಮನಿಸಿ: ಬೇರೆ ಯಾವ website ನಲ್ಲೂ ಅರ್ಜಿ ಹಾಕಬೇಡಿ. ಅಧಿಕೃತ ಸೈಟ್ ಮಾತ್ರ ಬಳಸಬೇಕು.

ಹಂತ 2: ಹೊಸ ಅಭ್ಯರ್ಥಿಯಾಗಿ ನೋಂದಣಿ (Registration)

  • Homepage ನಲ್ಲಿ “Registration” ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಮೂಲ ಮಾಹಿತಿ ನಮೂದಿಸಿ:
  • ಹೆಸರು (SSLC ಪ್ರಕಾರ)
  • ಜನ್ಮ ದಿನಾಂಕ
  • ಮೊಬೈಲ್ ಸಂಖ್ಯೆ
  • ಇಮೇಲ್ ಐಡಿ
  • OTP ಮೂಲಕ ನಿಮ್ಮ ಮೊಬೈಲ್ verify ಮಾಡಬೇಕು

✔️ ನೋಂದಣಿ ಆದ ಮೇಲೆ ನಿಮಗೆ Login ID ಮತ್ತು Password ಸಿಗುತ್ತದೆ.

ಹಂತ 3: Login ಮಾಡಿ ಅರ್ಜಿ ಫಾರ್ಮ್ ಭರ್ತಿ ಮಾಡಿ

  • ನಿಮ್ಮ ID ಮತ್ತು Password ಬಳಸಿ Login ಮಾಡಿ
  • “Apply Online” ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಹುದ್ದೆ ಆಯ್ಕೆ ಮಾಡಿ (GD / Technical / Clerk / Tradesman)

ಅದಾದ ಮೇಲೆ ಕೆಳಗಿನ ಮಾಹಿತಿಯನ್ನು ತುಂಬಬೇಕು:

  • ವೈಯಕ್ತಿಕ ಮಾಹಿತಿ
  • ಶಿಕ್ಷಣ ವಿವರ
  • ವಿಳಾಸ
  • ವರ್ಗ (SC/ST/OBC/General)
  • ಪರೀಕ್ಷಾ ಕೇಂದ್ರ ಆಯ್ಕೆ

⚠️ ಎಲ್ಲಾ ಮಾಹಿತಿಯನ್ನು ಸರಿಯಾಗಿ ತುಂಬಬೇಕು. ತಪ್ಪಾದರೆ ನಂತರ ಸಮಸ್ಯೆ ಆಗಬಹುದು.

ಹಂತ 4: ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ

ಕೆಳಗಿನ ದಾಖಲೆಗಳನ್ನು scan ಮಾಡಿ upload ಮಾಡಬೇಕು:

  • ಪಾಸ್ಪೋರ್ಟ್ ಸೈಸ್ ಫೋಟೋ
  • ಸಹಿ
  • SSLC / PUC ಅಂಕಪಟ್ಟಿ
  • ಆಧಾರ್ ಕಾರ್ಡ್
  • ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)

📌 Photo ಮತ್ತು Signature size notification ನಲ್ಲಿ ನೀಡಿರುವಂತೆ ಇರಬೇಕು.

ಹಂತ 5: ಅರ್ಜಿ ಶುಲ್ಕ ಪಾವತಿ

  • ₹250 ಶುಲ್ಕ ಪಾವತಿಸಬೇಕು
  • ಪಾವತಿ ವಿಧಾನ:
  • UPI
  • Debit Card
  • Credit Card
  • Net Banking

✔️ Payment success ಆದ ನಂತರ receipt save ಮಾಡಿಕೊಳ್ಳಿ.

ಹಂತ 6: Final Submit ಮಾಡಿ

  • ಎಲ್ಲಾ ಮಾಹಿತಿ ಮತ್ತೊಮ್ಮೆ ಪರಿಶೀಲಿಸಿ
  • “Submit” ಬಟನ್ ಮೇಲೆ ಕ್ಲಿಕ್ ಮಾಡಿ

✔️ Submit ಆದ ನಂತರ Application Form ಅನ್ನು PDF ರೂಪದಲ್ಲಿ download ಮಾಡಿ

✔️ Print ತೆಗೆದುಕೊಂಡು safe ಆಗಿ ಇಟ್ಟುಕೊಳ್ಳಿ

📌 ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ವಿಷಯಗಳು

🔴 ಕೊನೆಯ ದಿನದವರೆಗೆ ಕಾಯಬೇಡಿ

🔴 ಮೊಬೈಲ್ OTP ಬರದಿದ್ದರೆ ನೆಟ್ ಚೆಕ್ ಮಾಡಿ

🔴 ತಪ್ಪು ಮಾಹಿತಿ ನೀಡಬೇಡಿ

🔴 Fake agents ಅಥವಾ middleman ಮೇಲೆ ನಂಬಿಕೆ ಇಡಬೇಡಿ

🔴 Official notification ಓದಿದ ನಂತರ ಮಾತ್ರ apply ಮಾಡಿ

ಅರ್ಜಿ ಸಲ್ಲಿಸುವ ಕೊನೆಯ ದಿನ

📅 01 ಏಪ್ರಿಲ್ 2026 (ಅಂದಾಜು)

ಕೊನೆಯ ದಿನದಂದು server busy ಆಗಬಹುದು. ಆದ್ದರಿಂದ ಬೇಗ ಅರ್ಜಿ ಹಾಕುವುದು ಉತ್ತಮ.

📑 ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್
  • SSLC / PUC ಅಂಕಪಟ್ಟಿ
  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ನಿವಾಸ ಪ್ರಮಾಣಪತ್ರ
  • ಫೋಟೋ & ಸಹಿ

🎯 ನಮ್ಮ ಸಲಹೆ

ನೀವು ಈಗಲೇ:

✔️ ನಿಮ್ಮ ದಾಖಲೆಗಳು ready ಇಟ್ಟುಕೊಳ್ಳಿ

✔️ Photo & Signature scan ಮಾಡಿ

✔️ Email ಮತ್ತು Mobile active ಇಟ್ಟುಕೊಳ್ಳಿ

ಅರ್ಜಿ ಪ್ರಕ್ರಿಯೆ ಸರಿಯಾಗಿ ಮಾಡಿದರೆ ಮುಂದೆ ಪರೀಕ್ಷೆ ಮತ್ತು physical ಮೇಲೆ concentrate ಮಾಡಬಹುದು.

🏃‍♂️ ಸಿದ್ಧತೆ ಸಲಹೆಗಳು
  • ಪ್ರತಿದಿನ ಓಟ ಅಭ್ಯಾಸ ಮಾಡಿ
  • ಮಾದರಿ ಪ್ರಶ್ನೆಪತ್ರಿಕೆ solve ಮಾಡಿ
  • GK ಓದಿ
  • ಯೂಟ್ಯೂಬ್‌ನಲ್ಲಿ army fitness training videos ನೋಡಿ
  • ಶಿಸ್ತು ಪಾಲಿಸಿ

⚠️ ಗಮನಿಸಿ

  • ನಕಲಿ ಜಾಹೀರಾತುಗಳಿಂದ ದೂರವಿರಿ
  • ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಿ
  • ಕೊನೆಯ ದಿನದವರೆಗೆ ಕಾಯಬೇಡಿ
Frequently Asked Questions (FAQ)

ಯಾರು ಅರ್ಜಿ ಹಾಕಬಹುದು? → 8ನೇ/10ನೇ/12ನೇ ಪಾಸ್ 17½–21 ವರ್ಷ ವಯಸ್ಸಿನವರು

ಮಹಿಳೆಯರಿಗೆ ಅವಕಾಶ ಇದೆಯೇ? → ಹೌದು, ಅಧಿಸೂಚನೆ ಆಧಾರಿತ

ವೇತನ ಎಷ್ಟು? → ₹30,000 – ₹40,000

ಸೇವಾ ನಿಧಿ ಎಂದರೇನು? → 4 ವರ್ಷಗಳ ನಂತರ ₹11.71 ಲಕ್ಷ

ಪರೀಕ್ಷೆ ಯಾವ ಭಾಷೆಯಲ್ಲಿ? → ಹಿಂದಿ ಮತ್ತು ಇಂಗ್ಲಿಷ್

🏁 ನಮ್ಮ ಕೊನೆಯ ಮಾತು

ಅಗ್ನಿವೀರ್ ನೇಮಕಾತಿ 2026 ಕೇವಲ ಒಂದು ಉದ್ಯೋಗವಲ್ಲ. ಇದು ದೇಶಸೇವೆಯ ಅವಕಾಶ. ನಿಮ್ಮ ಭವಿಷ್ಯವನ್ನು ಬಲಪಡಿಸುವ ಅವಕಾಶ. ₹30,000 ಸಂಬಳ, 4 ವರ್ಷಗಳ ಅನುಭವ, ಲಕ್ಷಾಂತರ ಸೇವಾ ನಿಧಿ – ಇವೆಲ್ಲವೂ ಒಂದೇ ಅವಕಾಶದಲ್ಲಿ.

ಅರ್ಹರಾಗಿದ್ದರೆ ತಡ ಮಾಡದೇ ಅರ್ಜಿ ಸಲ್ಲಿಸಿ. ನಿಮ್ಮ ಕನಸಿನ ಸೇನಾ ಜೀವನ ಆರಂಭವಾಗಬಹುದು.

Leave a Comment